ಎಲ್ಲರದೂ
ಮುಂಜಾನೆ ಫರಾಳ ಆತೇನು? ಏನ್
ತಿಂದ್ರಿ ಅವಲಕ್ಕಿ, ಉಪ್ಪಿಟ್ಟು, ದ್ವಾಶಿ ಅಥವಾ ಇಟ್ಲಿ, ಬಡಾ
ಸಾಬರ!!??
ಇಟ್ಲಿ, ಬಡಾ ಸಾಬರ ಇವೇನೂ ಹೊಸ
ಪದಾರ್ಥ ಅನ್ಕೊಂಡ್ರಿ?? ಇವೆಲ್ಲ ಇಡ್ಲಿ ವಡಾ
ಮತ್ತ ಸಾಂಬಾರ ಇದರ ಅಪಭ್ರಂಶ ರೂಪ. ನಾರ್ತ್ ಇಂಡಿಯಾದಾಗ ಕೆಲವೊಬ್ಬರು ಹಿಂಗ ಉಚ್ಚಾರ ಮಾಡ್ತಾರ,
( ಎಲ್ಲರೂ ಅಲ್ಲ ಮತ್ತ ) ಅಷ್ಟ ಅಲ್ಲ
ಅಂಗಡಿ ಹೊರಗ ಬೋರ್ಡ್
ಮ್ಯಾಲೇನೂ ಬರದಿದ್ದ ನೋಡೆನಿ, ಅವರನ್ನ ಹಿಂಗಲ್ಲ ಹಿಂಗ ಅಂತ ತಿದ್ದಿನೂ ಬಂದೇನಿ. ನಿಮ್ಮಲೆನೂ ಕೆಲವೊಬ್ಬರಿಗೆ ಉತ್ತರ ಭಾರತದಾಗ ಈ
ಅನುಭವ ಆಗಿರಲಿಕ್ಕೆ ಸಾಕು.
ಈ ಕಡೆ ಮಂದಿ ನಮ್ಮ
ದ್ವಾಶಿ ಇಡ್ಲಿ ಅಂದ್ರ ಮೂಗ
ಕೊಯ್ಯಕೊತಾರ ನೋಡ್ರಿ. ನಮ್ಮ ಕಡೆ
ನಾರ್ತ್ ಇಂಡಿಯನ್ ಊಟಕ್ಕ ಕ್ರೇಜ್
ಅದಲಾ ಹಂಗೆ.ಯಾವಾದರೆ
ಸೌತ್ ಇಂಡಿಯನ್ ರೆಸ್ಟೋರೆಂಟ್ ಇರಲಿ
ಅಥವಾ ನಮ್ಮ ದೆಹಲಿ ಕರ್ನಾಟಕ
ಸಂಘದ ಫುಡ್ ಸೆಂಟರ್ ಇರಲಿ ಜನರಿಂದ ತುಂಬಿ ತುಳಕತಿರ್ತಾವ.
![]() |
ದೆಹಲಿ ಕನಾಟಕ ಸಂಘದ ಫುಡ್ ಸೆಂಟರ್ನಾಗಿಂದು ವಡಾ , ಚಿತ್ರ ಕೃಪೆ : ಇಂಟರ್ನೆಟ್ |
ಇವರ ಇನ್ನೂ ಒಂದ ದೊಡ್ಡ
ವೀಕ್ ನೆಸ್ ಅಂದ್ರ
ಸಾಂಬಾರ್ ನೋಡ್ರಿ. ಅದನ್ನ ಮತ್ತ ಮತ್ತ ಹಾಕಿಸಿಗೊಂಡು
ಸವಿತಾರ. ಒಂದ ಮಸಾಲಾ ದೋಸಾ
ತಿನ್ನೋದ್ರಾಗ ಅಂದ್ರ ಸರಾಸರಿ ೩
ಬಟ್ಟಲ ಸಾಂಬಾರ ಸ್ವಾಹಾ ಆಗಿರತದ.
ಯಾರಾದರೂ ನಮ್ಮ
ಕಡೆಯವರು ಮನಿ
ಬಾಜೂಕ ಇರಲಿಕ್ಕೆ
ಬಂದರ ಅಂದ್ರ ಸಾಕು " ಭಾಭಿಜಿ,
ಇಡ್ಲಿ ದೋಸಾ ಕಬ್ ಖಿಲಾವೊಗೆ?"
ಅಂತಾನೋ ಅಥವಾ
" ಹಮೇ ಭೀ ಸಿಖಾವೊ"
ಅಂತ ಆತ್ಮೀಯತೆ ಇಂದ ಕೇಳ್ತಾರೆ.
ಮಾಡಲಿಕ್ಕೆ ಕಲಿಬೇಕು ಅಂದ್ರ ಎಲ್ಲಿಂದ ಶುರು ಆಗ್ತದ ಅಂದ್ರಿ? ಇಡ್ಲಿ ಕುಕ್ಕರ್, ದೋಸಾ ಹಂಚು ಖರೀದಿ
ಇಂದ ಸುರು ಆಗಿದ್ದು ಕೊಬ್ಬರಿ ಚಟ್ನಿ ಮಾಡೋ
ತನಕ ಅಂದ್ರ ಒಂದ
ಸಣ್ಣ ಕೋರ್ಸ್ ಆಗ್ತದ.
" ಕಲ್ ಬನಾವುಂಗಿ, ಬಾಬುಕೋ ಟಿಫನ್ ಮೆಂ ಭೀ ದುಂಗಿ " ಅಂತ ತಮ್ಮ ಮನಿ ಮಂದಿಗೆ ಮಾಡಿ
ಹಾಕಿ ನಮಗೊಂದು ವಾಟ್ಸಾಪ್ ನಾಗ
ಫೋಟೋ ಹಾಕಿ ತಮ್ಮ ಖುಶಿ
ಹಂಚಿಗೊತಾರ.
No comments:
Post a Comment