ನವರಾತ್ರಿ ಉಪವಾಸದ ಸಂಭ್ರಮ


ನಮ್ಮ ನಾಡಹಬ್ಬ ನವರಾತ್ರಿ ಅಲ್ರಿ ಅದಕ ಅದರಿಂದನ ಸುರು ಮಾಡೋಣ ಹಂಗಾರ.

ಉತ್ತರ ಭಾರತದಾಗ ನವರಾತ್ರಿ ಹತ್ತಿರ ಬಂತು ಅಂದ್ರ ಮಾರ್ಕೆಟ್‍ನಾಗ ಸಂಭ್ರಮ ನೋಡಬೇಕು. ದೇವಿಗೆ (ಮಾತಾ ಅಂತಾರ ಇಲ್ಲೆ) ಎರಸಲಿಕ್ಕೆ ಚುನರಿ ವಸ್ತ್ರ ಮಾರಲಿಕ್ಕೆ ಇರತಾವ ನೋಡಲಿಕ್ಕೆ ಎರಡ ಕಣ್ಣ ಸಾಲಂಗಿಲ್ಲ. ಬಣ್ಣ ಬಣ್ಣದ ವಸ್ತ್ರ ಇರತಾವ ಆದ್ರ ಕೇಂಪು ಬಣ್ಣಕ್ಕ ಪ್ರಾಮುಖ್ಯತೆ ಇರತದ.

ಇಲ್ಲೆ ನವರಾತ್ರಿನಾಗ ಉಪವಾಸ ಮಾಡೊ ಪದ್ದತಿ ಅದ. ಸಣ್ಣವರು, ದೊಡ್ಡವರು, ಹೆಂಗಸರು ಗಂಡಸರು ಅನ್ನಲ್ಲದೆ ಯಾರರೇ ಮಾಡಬಹುದು. ಅದಕ ಅವರು “ವ್ರತ ರಖತೆಂ ಹೈಂ” ಅಂತಾರ ಉಪವಾಸದಾಗ ತಿನ್ನಲಿಕ್ಕೆ ಅಂತ ಪರಿ ಪರಿ ಸಾಮಗ್ರಿಯಿಂದ ಅಂಗಡಿಗೊಳು ತುಂಬಿ ತುಳಕತಾವ. ಬಟಾಟಿ ಚಿಪ್ಸ್, ರಾಜಗಿರಿ ಉಂಡಿ, ಸಾಬುದಾಣಿ ಸಂಡಗಿ, ಬಟಾಟಿ ಹಪ್ಪಳ, ಹುರದ ಶೇಂಗಾ, ವರೇದ ಅಕ್ಕಿ, ಉಪವಾಸಕ್ಕ ಪೂರಿ ಮಾಡಲಿಕ್ಕೆ ತರಹ ತರಹದ ಹಿಟ್ಟು. ಒಂದ ಎರಡ

   
          ಮತ್ತ ಇಷ್ಟ ಆತು ಅನಕೊಬ್ಯಾಡ್ರಿ, ಹೋಟೆಲ್‍ನಾಗೂ “ವ್ರತ ಕಿ ಥಾಲಿ” ಅಂತ ಬೇರೆ ಸಿಗತದ. ಅದ್ರಾಗ ಪನೀರಇಂದ ಮಾಡಿದ್ದ ಪದಾರ್ಥ,  ಬಟಾಟಿ ಪಲ್ಯ, ವರೆದ ಅಕ್ಕಿ ಪಲಾವ್, ಸಾಬುದಾಣಿ ವಡಾ,  ಮಿಲ್ಕ ಶೇಕ್, ಸಾಬುದಾಣಿ ಪಾಯಸ, ಸೌತಿಕಾಯಿ ಭಜ್ಜಿ, ಕುಟ್ಟು ಕಿ ಪೂರಿ ಹಿಂಗೆಲ್ಲಾ ಇರತಾವ.




ನೋಡ್ರಿ ನಿಮ್ಮ ಬಾಯಾಗೂ ನೀರ ಬಂತಿಲ್ಲೋ. ನಮ್ಮ ಕಡೆನೂ ಹೋಟೆಲ್‍ನಾಗ ಉಪವಾಸಕ್ಕ ಸ್ಪೆಷಲ್ ಮೇನು ಇರಬೇಕಲ್ಲಾ.

3 comments:

  1. Kharena bayag neer bantri

    ReplyDelete
  2. ಭಾರೀ ಆತ್ ಬಿಡ್ರೀಪಾ ನವರಾತ್ರಿ ಥಾಲಿ

    ReplyDelete