ನನಗ ಅನಸಿದ್ದು....

ಕೆಂಪು ಕೋಟೆನಾಗ ಛತ್ತಾ ಚೌಕ ಮಾರ್ಕೆಟ್ ,
 ಇಲ್ಲೆ ಕರಕುಶಲ ವಸ್ತು ಸಿಗ್ತಾವ 

        “ಎಲ್ಲಾರೂ ಮಾಡುವುದು ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿ” ಅಂತ ನಮ್ಮ ದಾಸರು ಹೇಳಿದಂಗ,  ನೌಕರಿ ಸಲುವಾಗಿ ಗಾಜಿಯಾಬಾದ, ಹರಿದ್ವಾರ ಮತ್ತ ದಿಲ್ಲಿ ಹಿಂಗ ಉತ್ತರ ಭಾರತದಾಗ ಇರೋ ಪ್ರಸಂಗ ಬಂತು ನಮಗ.

     
ಮೊದಲ ಸ್ವಲ್ಪ ನನಗೂ ಈ ಭಾಗದ ಬಗ್ಗೆ ಪೂರ್ವಾಗ್ರಹ ಇತ್ತು. ಆದರ ಎಲ್ಲಾ ಪ್ರದೇಶಕ್ಕೂ ಅದರದೇ ಒಂದ ವಿಷೇಶ ಇರತದ. ಆಮೇಲೆ ನನಗ ಇಲ್ಲಿ ಮಂದಿ, ವಾತಾವರಣ, ಊಟ, ಉಡಗಿ ಮನಸನಾಗ ಮನಿ ಮಾಡಿ ಕೂತಬಿಟ್ಟಂಗ ಆತು.
ನೀವೂ ಎಲ್ಲಾ ಉತ್ತರ ಭಾರತ ನೋಡಿರತಿರಿ. ಕೆಂಪುಕೋಟೆ, ಇಂಡಿಯ ಗೇಟ್ ಮತ್ತ ತಾಜಮಹಲ್ ಅಡ್ಡ್ಯಾಡಿ ಸೆಲ್ಫಿ ತೊಗೊಂಡ ಬಂದಿರತಿರಿ.  ಆದ್ರ ಒಂದ ಊರನ್ನ ಪ್ರವಾಸಿ ಅಂತ ನೋಡೊದಕ್ಕೂ, ನಿವಾಸಿ ಅಂತ ನೋಡೊದಕ್ಕೂ ಬಾಳ ಫರಕ ಅದ.
ಅದಕ  ಇಲ್ಲಿ ಸಣ್ಣ ಸಣ್ಣ ವಿಷಯ ನಿಮ್ಮ  ಎಲ್ಲಾರ ಜೊತಿ ಹಂಚಗೊಬೇಕು ಅನಸ್ತು.

         ಇದೇನ ಮತ್ತ ವಿಮರ್ಶನಾತ್ಮಕ ಲೇಖನ ಅಲ್ಲ, ಹಂಗ ಸುಮ್ಮನ ಲಘು ಬರಹ ಅನ್ನಬಹುದು.... ನನಗ ಸೇರೊ  ಪಾಪಡಿ ಚಾಟ್‍ಗತೆ ಚಟಪಟಾ.

       ನಿಮಗೂ “ಪಾಪಡಿ ಚಾಟ್” ರುಚಿ ಅನಸಿದ್ರ ತಪ್ಪದ ನಿಮ್ಮ ಅಭಿಪ್ರಾಯ ಕೆಳಗ comments ನಾಗ  ಹೇಳ್ರಿ ಮತ್ತ.

1 comment: